Spread the love

General Knowledge Quiz in Kannada

General Knowledge Quiz in Kannada ದಲ್ಲಿ ನಡೆಯುವ ಕ್ವಿಜ್ ನಲ್ಲಿ ಪ್ರಚಲಿತ ಘಟನೆಗಳ ಕುರಿತಂತೆ ಪ್ರಶ್ನೋತ್ತರಗಳನ್ನು ನೀಡಲಾಗುತ್ತದೆ.ಇತಿಹಾಸ,ಅರ್ಥಶಾಸ್ತ್ರ,ರಾಜಕೀಯ,ಸಂವಿಧಾನ,ಸಾಹಿತ್ಯ,ಕಲೆ ಮತ್ತು ವಾಸ್ತುಶಿಲ್ಪ , ತಂತ್ರಜ್ಞಾನ ,ದಿನ ವಿಶೇಷ , ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವಂತಹ ಪ್ರಮುಖ ಪ್ರಶ್ನೋತ್ತರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.ಇದರಿಂದ ನೀವು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವಿರಿ.ಮತ್ತು ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಕೇಳಲಾಗುತ್ತದೆ.ಎಲ್ಲ ಒಳಗೊಂಡ ಮಾದರಿ ಪ್ರಶ್ನೋತ್ತರ ಸರಣಿ ಇದಾಗಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಜಯಶಾಲಿಯಾಗಬೇಕಾದರೆ ಪ್ರತಿದಿನ ಅಧ್ಯಯನ ನಡೆಸುವುದು ಕಡ್ಡಾಯವಾಗಿದೆ.ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಅಂದರೆ ಪೋಲಿಸ್ ಕಾನ್ಸಟೇಬಲ್,ಪಿಎಸ್ಐ,ಅಬಕಾರಿ,ಪ್ರಥಮ ದರ್ಜೆ ಸಹಾಯಕ,ದ್ವಿತೀಯ ದರ್ಜೆ ಸಹಾಯಕ ,ಅರಣ್ಯ ರಕ್ಷಕ,ಅರಣ್ಯ ವಿಕ್ಷಕ,ಹೀಗೆ ಹತ್ತು ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬರುತ್ತದೆ.ಅದಕ್ಕಾಗಿ ದಿನವೂ ಕ್ವಿಜ್ ನಲ್ಲಿ ಭಾಗವಹಿಸುವುದರ ಮೂಲಕ ನಿಮ್ಮ ಜ್ಞಾನ ವೃದ್ಧಿ ಮಾಡಿಕೊಂಡು ಪರೀಕ್ಷೆಯಲ್ಲಿ ವಿಜಯಶಾಲಿ ಆಗಬಹುದಾಗಿದೆ.ಈ ಕ್ವಿಜ್ ನಲ್ಲಿ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಪ್ರಮುಖ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಬಹುತೇಕ ತಂದೆ ತಾಯಂದಿರುಗಳಿಗೆ ತಮ್ಮ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಮಹದಾಸೆ ಇರುತ್ತದೆ.ಆ ಹುದ್ದೆಗಳಲ್ಲಿ ತಾವು ಅಲಂಕರಿಸಬೇಕು ಎಂಬ ಆಸೆಯು ಸ್ಪರ್ಧಾರ್ಥಿಗಳಲ್ಲಿ ಸಹಜವಾಗಿಯೇ ಇರುತ್ತದೆ.ಆದರೆ ಅವುಗಳ ಕುರಿತಂತೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಕೊನೆಗೆ ನಿರಾಸೆ ಅನುಭವಿಸುತ್ತಾರೆ.ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಶಾಲಿಯಾಗಿ ಸರ್ಕಾರಿ ಹುದ್ದೆ ಪಡೆಯುವುದು ಎಲ್ಲ ಸ್ಪರ್ಧಾರ್ಥಿಗಳ ಮಹದಾಸೆ.ಈ ಮಹದಾಸೆಗೆ ವ್ಯವಸ್ಥಿತ ಅಧ್ಯಯನ ನಡೆಸಬೇಕು.ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಗತ್ಯವಾಗಿದೆ.ಆದ್ದರಿಂದ ಓದಿಗೆ ಒಂದು ವೇಳಾಪಟ್ಟಿ ಸಿದ್ಧಪಡಿಸಿ. ವೇಳಾಪಟ್ಟಿಗೆ ಅನುಗುಣವಾಗಿ ಎಲ್ಲಾ ವಿಷಯಗಳಿಗೂ ಸಮಯವನ್ನು ಹೊಂದಿಸಿ.ಓದಿನ ಜೊತೆಜೊತೆಗೆ ವಿಶ್ರಾಂತಿ ಕಡೆಗೂ ಗಮನ ಕೊಡಿ.ಕಷ್ಟದ ಅಥವಾ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯುವ ವಿಷಯಗಳಿಗೆ ಹೆಚ್ಚು ಸಮಯವನ್ನು ನೀಡಿ.
  ನಾವು ಓದುವ ವಿಧಾನದಿಂದಲೂ ಸಹ ನಮ್ಮ ಯಶಸ್ಸು ಅಡಗಿದೆ.ಅಧ್ಯಯನದ ಪ್ರಕಾರ ಬೆಳಗಿನ ನಾಲ್ಕರಿಂದ ಏಳು ಗಂಟೆಯ ವರೆಗಿನ ಓದಿಗೆ ಸೂಕ್ತವಾಗಿದೆ ಎನ್ನುತ್ತದೆ.ದಿನವಿಡೀ ಓದುತ್ತಲೇ ಇರುವುದರಿಂದ ಯಾವುದೇ ಪ್ರಯೋಜನವಿಲ್ಲ.ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ರೀತಿ ನಮ್ಮ ಓದಿರಬೇಕು.ಏಕಾಗ್ರತೆಯು ಬಹಳ ಮುಖ್ಯವಾದ ಸಾಧನವಾಗಿದೆ.ನಾನು ಚೆನ್ನಾಗಿ ಓದಬೇಕೆಂಬ ಧೃಡ ಮನಸ್ಸಿನಿಂದ ಓದಿದರೆ ಯಾವುದೇ ತೊಡಕು ಬಂದರೂ ಅದು ಲೆಕ್ಕಕ್ಕಿಲ್ಲ.ಹೆಚ್ಚು ಹೆಚ್ಚು ಪ್ರಶ್ನೋತ್ತರಗಳನ್ನು ಬಿಡಿಸುವುದರಿಂದ ನಮಗೆ ಪರೀಕ್ಷೆಯ ಬಗೆಗಿನ ಭಯವು ಮಾಯವಾಗುತ್ತದೆ.
   ಪ್ಲಾನ್ ಮಾಡಿ ಓದುವುದರಿಂದ ನಮ್ಮ ಸಮಯವೂ ಉಳಿತಾಯವಾಗುತ್ತದೆ.ಜ್ಞಾನವೂ ಹೆಚ್ಚುತ್ತದೆ.ದಿನದ 18 ಗಂಟೆ ಯಾವುದೋ ಪುಸ್ತಕ ಓದುವುದರಿಂದ ಉಪಯೋಗವಿಲ್ಲ.ಪರೀಕ್ಷೆಯಲ್ಲಿ ನಿಗದಿಪಡಿಸಿದ ಪಠ್ಯಕ್ರಮದ ಅನುಸಾರ ಯೋಜನಾ ಬದ್ಧವಾಗಿ ಓದುವುದರಿಂದ ಯಶಸ್ಸು ಸಾಧ್ಯ.ನಮ್ಮ ಕಠಿಣ ಪರಿಶ್ರಮವೇ ನಮ್ಮ ವಿಜಯಕ್ಕೆ ಕಾರಣ.
  
   

START QUIZ

Leave a Reply

Your email address will not be published. Required fields are marked *